S Harish

Achievements

CHINNARA DHAMA - KIDSPLAYGROUND

“For the First time an Exclusive park orchildren was developed by Corporator Shri. S.Harish 'ChinnaraDhama' playground - specially for Kids"

UDYOGAMELA - JOBFAIR

(From Sweeper to Software )

“ He has conducted JOB Fair for unemployed youths in constituency & has launched PMKY JOB Fair in Karnataka by Shri.D.V.SadanandaGowdaji ”

VajpayeeCUP

( National level volleyball competition )

"In the name of our beloved & late Prime Minister Bharat Ratna Shri. Atal Bihari Vajpayee-Rajajinagar Sport & Cultural Association Led by Shri S.Harish is conducting National / South Zone / State level Volleyball Competitions Since from last 18 years on Vajpayee's Birth Anniversary"

FREE CANCER CHECK-UP CAMP

“ Many cancer patients do not undergo treatment since they cannot afford such high costs. Apart fromtreating cancer, Shri. S.Harish is actively involved in educating and creating awareness about cancer by conducting free cancer detection camps ”

JANAMANA JATHRE

“ A Cultural Awareness Program by Rajajinagar Sports & Cultural Association Led by Shri.S.Harish-Talented Artistes from All over India with their spectacular performances from various fields such as Song, Dance, Drama, Laughter, Artetc. ”

world environment day

"Shri S.Harish creating awareness on environmental issues which everyone must be aware and give there positive efforts to solve such issues, especially on water, cleanliness & danger of using plastic"

Women's day

"On international women's day rajajinagar sports & cultural association under the leadership S.Harish conducting many cultural programs for women like health camp, sports, rangoli competitions, essay writing etc, and also felicitate many upcoming women entrepreneurs"

Health camp Arogyasiri

"Conducting regular free health check-up camp for poor and need every month 2nd sunday from past 6 years"

immigration of ganesh idols

"Taking a step towards protecting the environment yet fulfilling the festive enthusiasm, by introducing immersion tank where the devotees themselves immerse the idol from their own hands, this initiative was replicated in all 198 wards of B.B.M.P"

Achievement Summary

First Green office in BBMP limits - CFB
First LEB Pilot Project in BBMP limits - ward no. 67, Nagapura ward
First auto switch off/on of street lights in - ward no. 67, Nagapura ward
First ward to implement rain water harvesting system in drains
First ward to implement immersion tanks for Ganesha idols
First ward to implement Bio methanization of municipal waste
First ward to implement open gyms in parks
First block flyover foundation and inguration

ಬೆಂಗಳೂರಿಗೆ ಹೆಮ್ಮೆಯ ಗರಿ

ಮೇಜರ್ ಮರ್ಸರ್ ಎಂಬ ಜಾಗತಿಕ ಮಾನವ ಸಂಪನ್ಮೂಲ ಕನ್ಸಲ್ಟೆನ್ಸಿಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಬೆಂಗಳೂರು ಭಾರತದಲ್ಲಿ ನಂ.೧ ವಾಸಯೋಗ್ಯ ನಗರವೆಂದು ಹೊರಹೊಮ್ಮಿದೆ. ಜಾಗತಿಕವಾಗಿ ೧೪೧ನೇ ಸ್ಥಾನದಲ್ಲಿರುವ ಬೆಂಗಳೂರು ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ವೈಯಕ್ತಿಕ ಭದ್ರತೆಯಲ್ಲಿ ಬೆಂಗಳೂರು ಜಾಗತಿಕವಾಗಿ ೧೧೭ನೇ ಸ್ಥಾನದಲ್ಲಿದೆ. ಉತ್ತಮ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಡೆಲ್ಲಿ, ಮುಂಬೈ ಹಾಗೂ ಚೆನ್ನೆöÊ ಮಹಾನಗರಗಳು ಬೆಂಗಳೂರಿನ ನಂತರದ ಸ್ಥಾನದಲ್ಲಿದೆ.

ಕನ್ನಡಕ್ಕೆ ಗೌರವಾರ್ಪಣೆ

ಅವಿರತವಾಗಿ ಕನ್ನಡ ಸಿನಿಮಾ ರಂಗಕ್ಕೆ ಸೆವೆ ಸಲ್ಲಿಸಿ ತಮ್ಮ ಜೀವನವನ್ನೇ ಕನ್ನಡಕ್ಕಾಗಿ ಮುಡುಪಾಗಿಟ್ಟಿದ್ದ ನಮ್ಮೆಲ್ಲರ ದೊಡ್ಡಣ್ಣ ಕನ್ನಡದ ಕಣ್ಮಣಿ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್ ಕುಮಾರ್ ಅವರ ಸಮಾಧಿಯನ್ನು ಒಂದು ಉತ್ತಮ ಪ್ರವಾಸಿ ತಾಣವಾಗಿ ನಿರ್ಮಿಸಲು ಯೋಜನೆ ಕೈಗೆತ್ತಿಗೊಂಡು ಈಗಾಗಲೇ ಸಾಕಷ್ಟು ಕಾಮಗಾರಿ ಪ್ರಗತಿ ಹಂತದಲ್ಲಿದೆ.

ಹಾಗೇ ಸತತ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ ಡಾ. ವಿಷ್ಣುವರ್ಧನ್ ಅವರ ಸವಿನೆನಪಿಗಾಗಿ ಬೆಂಗಳೂರು ನಗರದ ಪಟ್ಟಾಭಿರಾಮನಗರದ ಉದ್ಯಾನವನಕ್ಕೆ ವಿಷ್ಣುವರ್ಧನ ವಿಶ್ರಾಂತಿ ವನ ಎಂದು ನಾಮಕರಣ ಮಾಡಲಾಗಿದೆ.
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹೋರಾಟಗಾರರಿಗೆ ಹಾಗೂ ಕಲಾವಿದರಿಗೆ ಅವರವರ ಸೇವೆಯನ್ನು ಗುರುತಿಸಿ ಪುರಸ್ಕರಿಸಿದ ಹೆಮ್ಮೆ ನಮ್ಮದಾಗಿದೆ. ಇದೇ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಂಬಾರರಿಗೆ ಪೌರಸನ್ಮಾನ

ಕನ್ನಡಕ್ಕೆ ಎಂಟನೇ ಜ್ಞಾನಪೀಠ ದೊರಕಿಸಿಕೊಟ್ಟ ಕನ್ನಡದ ಹೆಮ್ಮೆಯ ಕವಿ ಡಾ. ಚಂದ್ರಶೇಖರ ಕಂಬಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೌರ ಸನ್ಮಾನ ಏರ್ಪಡಿಸಿತ್ತು. ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯಕ್ಕೆಹಾಗೂ ಸಾರಸ್ವತ ಲೋಕಕ್ಕೆ ಗೌರವ ತಂದ ಕಂಬಾರರನ್ನು ಪಾಲಿಕೆ ಅಭಿನಂದಿಸುವ ಮೂಲಕ ಕನ್ನಡ ಕಾಳಜಿ ಮೆರೆಯಿತು.

ವಾಜಪೇಯಿ ಆರೋಗ್ಯ ಶ್ರೀ ಕಾರ್ಡ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಾಜಪೇಯಿ ಆರೋಗ್ಯ ಶ್ರೀ ಕಾರ್ಡ್ ವಿತರಣೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿಇ ದೇ ಪ್ರಥಮ ಬಾರಿಗೆ ಕೈಗೆತ್ತಿಕೊಳ್ಳಲಾಯಿತು. ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ಅವರ ಇಡೀ ಕುಟುಂಬಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಯಾವುದೇ ವೆಚ್ಛವಿಲ್ಲದೆ ಸಂಪೂರ್ಣ ಆರೋಗ್ಯ ಸೇವೆಯನ್ನು ಒದಗಿಸುವ ಯೋಜನೆ ಇದಾಗಿದೆ. ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ಗುರುತಿಸಿ ಈ ಕಾರ್ಡ್ಗಳನ್ನು ಅವರಿಗೆ ವಿತರಿಸಲಾಗಿದೆ.

ಅಂಗಾಂಗ ದಾನ

ಉಪಮಹಾಪೌರರಾದ ಎಸ್. ಹರೀಶ್‌ರವರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿ ನಗರದ ಖ್ಯಾತ ಮೋಹನ ಫೌಂಡೇಶನ್‌ರವರಿಗೆ ದಾನಪತ್ರಕ್ಕೆ ಸಹಿ ಹಾಕುವ ಮೂಲಕ ಇಡೀ ರಾಜ್ಯದ ನಾಗರೀಕರಿಗೆ ಮಾದರಿಯಾಗಿದ್ದಾರೆ. ಕೇವಲ ಎಲ್ಲರಿಗೂ ಉಪದೇಶ ಮಾಡದೆ ತಾವೇ ಅಂಗಾಂಗ ದಾನ ಮಾಡುವ ಮೂಲಕ ತಾವೆಷ್ಟು ಸಮಾಜಮುಖಿ ಎಂಬುದನ್ನು ಕೃತಿಯಲ್ಲಿ ಮಾಡಿ ತೋರಿಸಿದ್ದಾರೆ. ಈಗಾಗಲೇ ಕ್ರಿಕೆಟ್ ಪಟು ಶ್ರೀನಾಥ್ ಮತ್ತು ಕಿರು ಹಾಗೂ ಹಿರಿತೆರೆಯ ಹಲವಾರು ನಟ-ನಟಿಯರು ಈ ಅಂಗಾAಗ ದಾನಕ್ಕೆ ನಿರ್ಧರಿಸಿ ಅವರೂ ಕೂಡ ದಾನಪತ್ರಕ್ಕೆ ಸಹಿ ಮಾಡಿದ್ದಾರೆ.

ಡಾ. ರಾಜ್ ಕುಮಾರ್ ಇತರ ಆಟದ ಮೈದಾನಗಳ ಅಭಿವೃದ್ಧಿ

ಪ್ರತಿಷ್ಠಿತ ಡಾ. ರಾಜ್ ಕುಮಾರ್ ಆಟದ ಮೈದಾನ ಸೇರಿದಂತೆ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಸದುಪಯೋಗವಾಗಬೇಕಿದ್ದ ಅನೇಕ ಮೈದಾನಗಳು ಈ ಹಿಂದೆ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿದ್ದವು. ವಾರ್ಡ್ನ ವ್ಯಾಪ್ತಿಯಲ್ಲಿರುವ ಶಂಕರಮಠದ ಮೈದಾನ, ಬುದ್ಧ ಶಾಂತಿವನದ ಮೈದಾನಗಳಿಗೆ ಹೊಸರೂಪ ನೀಡಲಾಗಿದೆ. ಹೊಸ ಮಣ್ಣು ಹರಡುವ ಮೂಲಕ ಮೈದಾನಗಳನ್ನು ದುರಸ್ಥಿಗೊಳಿಸಲಾಗಿದ್ದು, ಆಟದ ಮೈದಾನದ ಸುತ್ತಲೂ ಕೂರಲು ಅನುಕೂಲವಾಗುವಂತೆ ಆರಾಮದಾಯಕ ಬೆಂಚುಗಳನ್ನು ಹಾಕಲಾಗಿದೆ.
ಡಾ. ರಾಜ್‌ಕುಮಾರ್ ಆಟದ ಮೈದಾನದ ಆಧುನೀಕರಣಕ್ಕಾಗಿ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಅನುದಾನವನ್ನು ಪಡೆದುಕೊಳ್ಳಲಾಯಿತು. ಇದೀಗ ಈ ಮೈದಾನದಲ್ಲಿ ೫ ಕೋಟಿ ರೂ. ವೆಚ್ಛದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ.
ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮವಾಗಿ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಸ್ಕೇಟಿಂಗ್ ಮೈದಾನವನ್ನು ಬಹುಶ್ರಮದ ಮೂಲಕ ಬಿಡುಗಡೆಗೊಳಿಸಿ ಎಲ್ಲಾ ಸ್ಕೇಟಿಂಗ್ ಪಟುಗಳಿಗೆ ಅಭ್ಯಾಸ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಆಧುನಿಕ ಸೌಕರ್ಯಗಳ ಆಗರ
ಬೆಂಗಳೂರು ಒನ್, ಸುಸಜ್ಜಿತ ಜಿಮ್ ಹಾಗೂ ಗ್ರಂಥಾಲಯಗಳ ಲೋಕಾರ್ಪಣೆ

ಈ ಹಿಂದೆ ಬಿಲ್‌ಗಳನ್ನು ಪಾವತಿಸಲು ಸಾರ್ವಜನಿಕರು ಬಹುದೂರ ಸಾಗಬೇಕಿತ್ತು. ಇದನ್ನು ಅರಿತು ನಮ್ಮ ವಾರ್ಡ್ನಲ್ಲಿ ಬೆಂಗಳೂರು ಒನ್ ಶಾಖೆಯನ್ನು ಪ್ರಾರಂಭಿಸಲಾಗಿದೆ. ಅಲ್ಲದೆ ವಾರ್ಡ್ ಕಚೇರಿಯ ಹಿಂಭಾಗದ ಸಂಕೀರ್ಣದಲ್ಲಿ ತೆರಿಗೆ ಸಂಗ್ರಹಣಾ ಕಚೇರಿ ಹಾಗೂ ಸಾರ್ವಜನಿಕ ಸಂಪರ್ಕ ಕೇಂದ್ರವನ್ನು ತೆರೆಯಲಾಗಿದೆ. ಕೇತಮಾರನಹಳ್ಳಿಯ ಸರ್ಕಾರಿ ಶಾಖೆಯಲ್ಲಿದ್ದ ೩೦ ವರ್ಷಗಳ ಹಳೆಯ ಜಿಮ್ ಅನ್ನು ೧೦ ಲಕ್ಷ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗಿದೆ. ಇಲ್ಲಿನªವೀನ ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗಿದೆ. ಹಾಗೆಯೇ ವಿವೇಕಾನಂದ ಪಾರ್ಕ್ನಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ.

"ಹಸಿರು ನಾಗಪುರ"
ಬೆಂಗಳೂರಿನ ಮಾದರಿ ವಾರ್ಡ್ ಹಸಿರು ಕಚೇರಿ

ಸುಮಾರು ೨೦ ವರ್ಷಗಳ ಹಿಂದೆ ನಿರ್ಮಿಸಿದ್ದ ಪಾಲಿಕೆ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದ್ದುದೇ ಅಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇದು ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತ್ತು. ಆದರೆ ಇದೀಗ ಕೇವಲ ೧೦ ಲಕ್ಷ ರೂ.ಗಳಲ್ಲಿ ಕಚೇರಿಯನ್ನು ನವೀಕರಿಸಲಾಗಿದ್ದು ಗ್ರೀನ್ ಆಫೀಸ್ ಅಥವಾ ಹಸಿರು ಕಚೇರಿಯೆಂದೇ ಹೆಸರಾಗಿದೆ. ಇದು ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಕಚೇರಿಯಲ್ಲಿ ೧.೫ ಲಕ್ಷ ರೂ. ಖರ್ಚು ಮಾಡಿ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿದ್ದು ಸೌರ ದೀಪಗಳನ್ನು ಬಳಸಲಾಗುತ್ತಿದೆ. ಅಲ್ಲಿ ಸಾಮಾನ್ಯ ವಿದ್ಯುತ್ ಬಳಕೆ ಮಿತವಾಗಿದೆ. ಹೀಗಾಗಿ ಕಳೆದ ಆರು ತಿಂಗಳಿನಿoದ ಕನಿಷ್ಠ ವಿದ್ಯುತ್ ಬಿಲ್ ಮಾತ್ರ ಪಾವತಿಸಲಾಗುತ್ತಿದೆ.
ಜೊತೆಗೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಇದಕ್ಕಾಗಿ ಇಂಗು ಗುಂಡಿ ನಿರ್ಮಿಸಲಾಗಿದೆ. ಕಟ್ಟಡದ ಮೇಲೆ ಬಿದ್ಧ ಮಳೆಹನಿ ನೀರು ಸೀದಾ ಈ ಇಂಗುಗುoಡಿಯನ್ನು ತಲುಪುತ್ತದೆ. ಕಚೇರಿಯ ಸುತ್ತಲೂ ಹಸಿರು ಗಿಡ-ಮರಗಳು ಕಣ್ಮನ ಸೆಳೆಯುತ್ತವೆ. ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಬಹಳಷ್ಟು ತಿಂಗಳ ಹಿಂದೆಯೇ ನಿಷೇಧಿಸಲಾಗಿತ್ತು. ಕಸ ಸಂಗ್ರಹಣೆಗೆ ಪ್ಲಾಸ್ಟಿಕ್ ಬುಟ್ಟಿಗಳ ಬದಲಾಗಿ ಬಿದಿರಿನ ಬುಟ್ಟಿಗಳನ್ನು ಬಳಸಲಾಗುತ್ತಿದೆ. ಕತ್ತರಿಸಿ ಬಿಸಾಡಿದ ತೆಂಗಿನ ಮರಗಳು ಇಲ್ಲಿ ಕುರ್ಚಿಗಳಾಗಿವೆ. ಈ ಕಚೇರಿಯನ್ನು ನೋಡಿದ ಹಲವು ಮಂದಿ ಸ್ಫೂರ್ತಿ ಪಡೆದು ತಮ್ಮ ಮನೆಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.

ಗಣೇಶ ವಿಸರ್ಜನೆಗೆ ಹೊಸ ವ್ಯವಸ್ಥೆ

ಗಣೇಶ ಚತುರ್ಥಿ ಸಂದರ್ಭದಲ್ಲಿ ವಿವಿಧ ಬಣ್ಣಗಳಿಂದ ಲೇಪಿತವಾದ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಬಣ್ಣಗಳಲ್ಲಿ ವಿಷಕಾರಿ ಸೀಸದ ಅಂಶವಿದ್ದು ಪರಿಸರಕ್ಕೆ ಮಾರಕ ಎಂದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಯೊ೦ದು ತಿಳಿಸಿದೆ. ಈ ಆಧಾರದ ಮೇಲೆ ಬೆಂಗಳೂರಿನಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವವರನ್ನು ಭೇಟಿ ಮಾಡಿದ ಉಪ ಮಹಾಪೌರ ಹರೀಶ್‌ರವರು ಪರಿಸರದ ಬಗ್ಗೆ ಅವರಲ್ಲಿ ಅರಿವು ಮೂಡಿಸಿ ನೈಸರ್ಗಿಕ ಬಣ್ಣಗಳನ್ನು ಬಳಸಿ ಅಥವಾ ಬಣ್ಣರಹಿತ ಗಣೇಶ ಮೂರ್ತಿಗಳನ್ನು ತಯಾರಿಸಲು ಮನವೊಲಿಸಿದರು.
ಈ ಬಾರಿ ಗಣೇಶ ಮೂರ್ತಿ ವಿಸರ್ಜನೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಸುಮಾರು ೬೩ ಸಂಚಾರಿ ಘಟಕಗಳನ್ನು ಸ್ಥಾಪಿಸಲಾಗಿತ್ತು. ಇದರಿಂದಾಗಿ ಚಿಕ್ಕ ಗಾತ್ರದ ಗಣೇಶ ಮೂರ್ತಿಗಳನ್ನು ಜನರು ತಮ್ಮ ಮನೆಯ ಬಳಿಯಲ್ಲೇ ಬಿಡುವಂತಾಗಲು ಸಾಧ್ಯವಾಯಿತು. ದೊಡ್ಡ ಮೂರ್ತಿಗಳನ್ನು ವಿಸರ್ಜಿಸಲು ನಿಗದಿಪಡಿಸಲಾಗಿದ್ದ ಕೆರೆಗಳ ಬಳಿ ಯಾವುದೇ ರೀತಿಯಲ್ಲಿ ಯಾರಿಗೂ ತೊಂದರೆಯಾಗದAತೆ ಹಾಗೂ ಕೆರೆಗಳ ಮಾಲಿನ್ಯಕ್ಕೆ ಆಸ್ಪದವೀಯದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು ಹಾಗೂ ವಿಸರ್ಜನೆಯ ಮೆರವಣಿಗೆ ಕಾಲದಲ್ಲಿ ಧ್ವನಿವರ್ಧಕ ಬಳಕೆ ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು.
ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಲಾಗುವ ಗಣೇಶೋತ್ಸವದಿಂದ ಸಾರ್ವಜನಿಕರಿಗೆ ಅನಾನುಕೂಲ ಅಥವಾ ತೊಂದರೆಯಾಗದAತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಲಾಗಿತ್ತು. ಈ ಕ್ರಮಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಯಿತು.
ಕಲರಪುಲ್ ಗಣೇಶ ತಯಾರಿಕೆಯಲ್ಲಿ ಬಳಸುವ ಲೆಡ್ ಎಳೆಯ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ನಾಳಿನ ಆರೋಗ್ಯಕರ ರಾಷ್ಟçನಿರ್ಮಾಣಕ್ಕೆ ಬುನಾದಿಯಾಗಿರುವ ಮಕ್ಕಳ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ಪರಿಸರಸ್ನೇಹಿ ಗಣಪತಿ ತಯಾರಿಕೆ ಮತ್ತು ಗಣೇಶ ವಿಸರ್ಜನೆಯನ್ನು ಬಿಬಿಎಂಪಿಯ ಕೃತಕವಾಗಿ ನಿರ್ಮಿಸಿದ ಮೊಬೈಲ್ ಹೊಂಡಗಳಲ್ಲಿಯೇ ವಿಸರ್ಜಿಸಲು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸ್ಪಂದಿಸಿದ್ದು ಗಮನಾರ್ಹವಾಗಿತ್ತು. ಒಂದು ಅಂದಾಜಿನ ಪ್ರಕಾರ ಸರಿಸುಮಾರು ನಗರದ ೨ ಲಕ್ಷಕ್ಕೂ ಹೆಚ್ಚಿನ ಗಣೇಶಗಳನ್ನು ಈ ಮೊಬೈಲ್ ಹೊಂಡಗಳಲ್ಲಿ ವಿಸರ್ಜಿಸಿ ತಮ್ಮ ಜವಾಬ್ದಾರಿಗಳನ್ನು ಮೆರೆದಿದ್ದಾರೆ. ಅದರಂತೆ ಈ ವಿಸರ್ಜನೆ ನಂತರ ಅದರಲ್ಲಿ ಸಂಗ್ರಹವಾದ ನೀರನ್ನು ಶುದ್ಧಿಕರಿಸಿ ಮರುಬಳಕೆಗೆ ಉಪಯೋಗಿಸಲಾಗಿದೆ. ನಂತರ ಅದರಲ್ಲಿ ಬಂದು ಬಿದ್ಧಿದ್ದ ಮಣ್ಣನ್ನು ಅದೇ ಗಣೇಶ ತಯಾರಕರಿಗೆ ನೀಡಲಾಗಿದ್ದು ಅದು ಕೂಡ ಮರುಬಳಕೆಗೆ ಸಿದ್ಧವಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ಮತ್ತು ನಗರದ ಸೌಂದರ್ಯಕ್ಕೆ ಹೆಚ್ಚಿನ ಅನುಕೂಲವಾಗಿದೆ.

ಸ್ಯಾಂಕಿ ರಸ್ತೆ ಅಗಲೀಕರಣ

ಹೆಚ್ಚು ವಾಹನ ಸಂಚಾರದಿoದ ಸದಾ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಕಿ ರಸ್ತೆಯ ಅಗಲೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾದರೂ ಹೈಕೋರ್ಟ್ ಬಿಬಿಎಂಪಿಯ ಕ್ರಮವನ್ನು ಎತ್ತಿಹಿಡಿಯಿತು. ಅಂತೆಯೇ ಅಲ್ಲಿನ ನಿವಾಸಿಗಳ ಮನದಾಳವನ್ನು ಅರಿತು ಅಗಲೀಕರಣಕ್ಕಾಗಿ ಕಡಿಯಲಾಗುವ ಮರಗಳಿಗೆ ಪ್ರತಿಯಾಗಿ ಹೊಸ ಸಸಿಗಳನ್ನು ನೆಡಲು ಬಿಬಿಎಂಪಿ ನಿರ್ಧರಿಸಿದೆ. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಬಿಬಿಎಂಪಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ.
ಸ್ಯಾಂಕಿ ರಸ್ತೆಯಲ್ಲಿ ಇಕ್ಕಟ್ಟಾದ ರಸ್ತೆಯಿಂದ ಉಂಟಾಗುವ ಸಂಚಾರಿ ದಟ್ಟಣೆಯಿಂದಾಗಿ ವಾಯುಮಾಲಿನ್ಯ ಹೆಚ್ಚಾಗಿದ್ದು ಅಲ್ಲಿ ಸಾಲು ಮರಗಳಿದ್ದರೂ ಕೂಡ ವಾಯುಮಾಲಿನ್ಯ ಆತಂಕಕಾರಿ ಪ್ರಮಾಣ ತಲುಪಿತ್ತು.

ಉನ್ನತ ವ್ಯಾಸಂಗಕ್ಕೆ ಸಹಾಯ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೈಗೊಳ್ಳಲು ಬಿಬಿಎಂಪಿ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ. ಬಿ.ಕೆ. ನವೀನ್‌ರಾಜ್ ಎಂಬ ವಿದ್ಯಾರ್ಥಿಯು ಬ್ರಿಟನ್ನಿನ ಬೆಡ್‌ಫೋರ್ಡ್ ವಿಶ್ವವಿದ್ಯಾನಿಲಯದ ಲ್ಯೂಟನ್ ಕ್ಯಾಂಪಸ್‌ನಲ್ಲಿ ೧೪ ತಿಂಗಳ ಅವಧಿಯ ಎಂಎಸ್ ಕಂಪ್ಯೂಟರ್ ಅನಿಮೇಷನ್ ಪದವಿ ಪಡೆಯಲು ಪಾಲಿಕೆ ೧೦ ಲಕ್ಷ ರೂ.ಗಳನ್ನು ನೀಡಿದೆ. ಇದೇ ರೀತಿ ಇನ್ನೂ ಹೆಚ್ಚಿನ ಸಂಖ್ಯೆಯ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಸುವ ಇರಾದೆ ಬಿಬಿಎಂಪಿಯದ್ದು.

ಹುಕ್ಕಾ ಬಾರ್ ನಿಷೇಧ

ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಬೆನ್ನಲ್ಲೇ ನಗರದ ಬಹಳಷ್ಟು ಯುವ ಜನರು ದುಶ್ಚಟಗಳ ದಾಸರಾಗುತ್ತಿರುವ ವಿಷಯ ಬೆಚ್ಚಿಬೀಳಿಸುವಂತಿತ್ತು. ಹುಕ್ಕಾ ಬಾರ್‌ಗಳು ನಮ್ಮ ಯುವ ಜನರನ್ನು ದಾರಿ ತಪ್ಪಿಸಿ, ಹುಕ್ಕಾಗಳಿಗೆ ದಾಸರಾಗುತ್ತಿದ್ದ ವಿಷಯ ಆತಂಕಕಾರಿಯಾಗಿತ್ತು. ಈ ಸಂದರ್ಭಗಳಲ್ಲಿ ಹುಕ್ಕಾ ಬಾರ್‌ಗಳ ಲೈಸೆನ್ಸ್ಗಳನ್ನೇ ರದ್ದುಪಡಿಸಿ ಅವುಗಳನ್ನು ನಿಷೇಧಿಸುವುದರಿಂದ ಯುವ ಸಮುದಾಯದವರನ್ನು ಸರಿದಾರಿಗೆ ತರುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದೇವೆ.
ಇನ್ನು ಪುಟಾಣಿ ಮಕ್ಕಳ ಮಾನಸಿಕ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರುವ ವಿಡಿಯೋಗೇಮ್ಸ್ ಕೇಂದ್ರಗಳ ಮೇಲೂ ದಾಳಿ ಮಾಡಿ ಅವುಗಳನ್ನು ಕೂಡ ನಿಷೇಧಿಸಲಾಗಿದೆ. ಈ ಮೂಲಕ ಬೆಂಗಳೂರಿನ ಕಂದಮ್ಮಗಳ ಚಿಕ್ಕ ವಯಸ್ಸಿನಲ್ಲೇ ಸಲ್ಲದ ರೀತಿಯಲ್ಲಿ ಸಮಯ ಪೋಲು ಮಾಡುವುದನ್ನು ನಿಯಂತ್ರಿಸಿದoತಾಗಿದೆ.

ಮರಳಿ ಬಾ ಮೈದಾನಕ್ಕೆ

ಬಿಬಿಎಂಪಿ ವತಿಯಿಂದ ಮರಳಿ ಬಾ ಮೈದಾನಕ್ಕೆ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಬಿಬಿಎಂಪಿ ಬಜೆಟ್‌ನಲ್ಲಿ ೨೦ ಕೋಟಿ ರೂ. ಮೀಸಲಿರಿಸಲಾಗಿದೆ. ನಗರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಜಾರಿ ಮಾಡಲಾಗಿದೆ. ಮೈದಾನಗಳನ್ನು ಹೆಚ್ಚಿಸುವುದು ಮತ್ತು ಅಲ್ಲಿ ಆಟ ಆಡುವ ಮಕ್ಕಳಿಗೆ ಅರ್ಹ ಕೋಚ್‌ಗಳಿಂದ ತರಬೇತಿ ಕೊಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.
ನಗರದ ಮಕ್ಕಳನ್ನು ಕಂಪ್ಯೂಟ್ ಹಾಗೂ ವಿಡಿಯೋ ಗೇಮ್‌ಗಳ ಹಿಡಿತದಿಂದ ಮುಕ್ತಿಗೊಳಿಸಿ, ವಾಲಿಬಾಲ್, ಖೋ ಖೋ, ಬಾಸ್ಕೆಟ್ ಬಾಲ್‌ನಂತಹ ಆಟಗಳು ಹಾಗೂ ಗ್ರಾಮೀಣ ಕ್ರೀಡೆಗಳ ಬಗ್ಗೆಯೂ ತರಬೇತಿ ಕೊಡಿಸಲಾಗುತ್ತದೆ. ಕ್ರಿಕೆಟ್ ಮತ್ತು ಇತರೆ ಶ್ರೀಮಂತ ಆಟಗಳನ್ನು ಈ ಯೋಜನೆಯಿಂದಹೆÆರತುಪಡಿಸಲಾಗಿದೆ. ನಿರುದ್ಯೋಗಿ ಯುವಕರು ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗುವುದನ್ನು ತಡೆಯಲು ಈ ಯೋಜನೆ ಸಹಾಯಕವಾಗಿದೆ.

LED ಬೀದಿ ದೀಪಗಳು

ಮಹಾಲಕ್ಷ್ಮಿಪುರಂ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಗಪುರ ವಾರ್ಡ್ ಒಂದರಲ್ಲೇ ೨ ಸಾವಿರಕ್ಕೂ ಹೆಚ್ಚಿನ ಬೀದಿ ದೀಪಗಳಿದ್ದು, ಇವೆಲ್ಲವೂ ೩೦೦ ವ್ಯಾಟ್ ಸಾಮರ್ಥ್ಯವುಳ್ಳದಾಗಿದ್ದು, ಎನರ್ಜಿ ಎಪಿಷಿಯೆಂಟ್‌ಮೆoಟ್ ಅಷ್ಟೇ ಬೆಳಕು ನೀಡುವಂತಹ ೭೨ ವ್ಯಾಟ್ ಸಾಮರ್ಥ್ಯದ ಎಲ್.ಇ.ಡಿ ಬೀದಿ ದೀಪಗಳನ್ನು ಪ್ರಾಯೋಗಿಕವಾಗಿ ೫೦೦ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರತಿ ತಿಂಗಳು ೪೦ ಸಾವಿರ ಯುನಿಟ್ ವಿದ್ಯುತ್‌ನ್ನು ಉಳಿತಾಯ ಮಾಡಿದಂತಾಗಿದೆ. ಪ್ರತಿ ತಿಂಗಳು ೨ ಲಕ್ಷ ರೂ.ಗಳಷ್ಟು ಹೊರೆಯಾಗುವುದನ್ನು ಕಡಿಮೆ ಮಾಡಲಾಗಿದೆ. ಅದಕ್ಕಿಂತ ಹೆಚ್ಚಾಗಿ ಗ್ಲೋಬಲ್ ವಾರ್ಮಿಂಗ್ ತಡೆಗಟ್ಟುವಲ್ಲಿ ನಮ್ಮದೊಂದು ಪುಟ್ಟ ಪ್ರಯತ್ನ ಇದಾಗಿದೆ. ಅದಲ್ಲದೇ ಸಾಮಾನ್ಯ ಬೀದಿದೀಪಗಳ ತಯಾರಿಕೆಯಲ್ಲಿ ಬಳಸಲ್ಪಡುವ ಪಾದರಸ/ಸೀಸ ಮುಂತಾದ ಹಾನಿಕಾರಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದರಿಂದಲೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಮಳೆ ನೀರು ಸಂಗ್ರಹ ಯೋಜನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಒಳಚರಂಡಿಗಳಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಒಳಚರಂಡಿಗಳಲ್ಲಿಯೇ ಇಂಗುಗುoಡಿ ಸ್ಥಾಪಿಸಿ ಇಂಗಿಸಲಾಗುತ್ತಿದೆ. ಬೆಂಗಳೂರಿನಾದ್ಯoತ ಈ ಕ್ರಮ ಕೈಗೊಂಡಿರುವುದರಿoದ ಅಂತರ್ಜಲದ ಮಟ್ಟ ಏರಿಕೆಯಾಗಿರುವುದು ಸಂತಸದ ಸಂಗತಿ. ಸಾರ್ವಜನಿಕರು ಕೂಡ ತಮ್ಮ ತಮ್ಮ ಖಾಸಗಿ ಜಾಗಗಳಲ್ಲಿ, ಖಾಲಿ ನಿವೇಶನಗಳಲ್ಲಿ ಹಾಗೂ ನೂತನವಾಗಿ ಕಟ್ಟಡ ಕಟ್ಟುವಾಗಲೇ ಮಳೆ ನೀರು ಸಂಗ್ರಹದ ಯೋಜನೆಯನ್ನು ಈಗಾಗಲೇ ಎಲ್ಲರು ಅಳವಡಿಸಿಕೊಂಡು ಅಂತರ್ಜಲ ನೀರಿನ ಮಟ್ಟ ಹೆಚ್ಚಿಸಲು ಅನುಕೂಲವಾಗುವಂತೆ ಸಹಕಾರವನ್ನು ಬಿಬಿಎಂಪಿಗೆ ನೀಡುತ್ತಿದ್ದಾರೆ.

ವಾಲಿಬಾಲ್ ಪಂದ್ಯಾವಳಿಯ ದಶಮಾನೋತ್ಸವ ಸಂಭ್ರಮ

ರಾಜಾಜಿನಗರ ವಿವಿಧ ರೀತಿಯ ಪ್ರತಿಭೆಗಳನ್ನೊಳಗೊಂಡ ಅಪೂರ್ವ ತಾಣ. ಅದರಲ್ಲೂ ಕ್ರೀಡಾ ಪ್ರತಿಭೆಗಳಿಗಂತೂ ರಾಜಾಜಿನಗರವೆಂದರೆ ಬಹಳಷ್ಟು ಪ್ರೀತಿ. ಆದರೆ ಮುಂಚೆ ಇಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಎಷ್ಟೋ ಪ್ರತಿಭೆಗಳಿಗೆ ಸಾಮರ್ಥ್ಯ ಮತ್ತು ಆಡಲು ಆಸೆಯಿದ್ದರೂ ಆಟದ ನೋಟದಷ್ಟೇ ದಕ್ಕುತ್ತಿತ್ತು. ಕೆಲವರಿಗೆ ಅದೂ ಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಇವರೆಲ್ಲರ ಪಾಲಿಗೆ ಸಂಜೀವಿನಿಯAತೆ ಒದಗಿಬಂದಿದ್ದು ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ. ೧೯೯೬ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘವು ಕ್ರೀಡೆಗೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲದೆ ಸಮಾಜ ಸೇವೆ, ರಾಷ್ಟ್ರೀಯ ಹಬ್ಬ ಆಚರಣೆ, ಮಕ್ಕಳು ಮತ್ತು ಯುವಜನರಿಗೆ ಕಂಪ್ಯೂಟರ್ ತರಬೇತಿಯಂತಹ ಕಾರ್ಯಗಳ ಜೊತೆಗೆ ಪರಿಸರ ಸಂರಕ್ಷಣೆ, ಯುವಶಕ್ತಿಯ ಕೇಂದ್ರೀಕರಣ ಮತ್ತು ಸಬಲೀಕರಣದಂತಹ ಕೆಲಸಗಳಲ್ಲೂ ಸಕ್ರಿಯವಾಗಿ ತೊಡಗಿತ್ತು. ಈ ಸಂಘದ ಹಿಂದಿನ ಪ್ರೇರಕ ಶಕ್ತಿ ಮತ್ತು ಬೆನ್ನೆಲುಬಾಗಿ ನಿಂತಿರುವವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಆಗಿರುವ ಶ್ರೀ ಎಸ್. ಹರೀಶ್ ಹಾಗೂ ಅವರ ಧರ್ಮಪತ್ನಿ. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದಂತಹ ಕ್ರೀಡಾಪಟುಗಳಾಗಿರುವ ಈ ದಂಪತಿಗಳು ಎಲೆಮರೆ ಕಾಯಿಯಂತಿದ್ದ ಅನೇಕ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಅವರನ್ನು ರಾಜ್ಯ ಹಾಗೂ ರಾಷ್ಟçಕ್ಕೆ ಸಮರ್ಪಣೆ ಮಾಡಿದ್ದಾರೆ. ಇವರಿಗೆ ಸಮಾಜಸೇವೆ ವೃತ್ತಿಯಾದರೆ ಕ್ರೀಡಾ ಪ್ರವೃತ್ತಿಯಾಗಿದೆ.
ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿತ್ವ ಹಾಗೂ ದೇಶಕ್ಕೆ ಅವರು ಸಲ್ಲಿಸಿರುವ ಸೇವೆಯಿಂದ ಪ್ರಭಾವಿತರಾದ ಹರೀಶ್‌ರವರು ವಾಜಪೇಯಿಯವರ ಹೆಸರಿನಲ್ಲಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ (ಡಿ.೨೫) ೨೦೦೧ರಿಂದ ಹತ್ತು ವರ್ಷಗಳ ಕಾಲ ಸತತ ವಾಲಿಬಾಲ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದಾರೆ. ಆರಂಭದಲ್ಲಿ ಮೂರು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಗಳು ನಡೆಯುತ್ತಿದ್ದವು. ಮೊದಲಿಗೆ ನಗರಮಟ್ಟದಲ್ಲಿ, ನಂತರ ಕಾಲೇಜು ಮಟ್ಟದಲ್ಲಿ ನಡೆದ ಪಂದ್ಯಾವಳಿಗಳು ಮುಂದೆ ಬಿ-ಡಿವಿಜನ್ ಹಂತ ಅದಾದ ಮೇಲೆ ಇಂಡಸ್ಟ್ರಿಯಲ್ ತಂಡಗಳು ಹಾಗೂ ಎ-ಡಿವಿಜನ್ ಪಂದ್ಯಾವಳಿಗಳವರೆಗೆ ನಡೆದವು. ಕಳೆದ ವರ್ಷ ದಕ್ಷಿಣ ವಲಯ ಮಟ್ಟದ ಪಂದ್ಯಾವಳಿಯಲ್ಲಿ ಎಲ್ಲಾ ತಂಡಗಳು ಭಾಗವಹಿಸಿ ಪಂದ್ಯಾವಳಿಯ ಮೆರುಗನ್ನು ಹಾಗೂ ಕಪ್‌ನ ಮೌಲ್ಯವನ್ನು ಹೆಚ್ಚಿಸಿದವು. ಎಲ್ಲಾ ಅಡೆತಡೆಗಳ ನಡುವೆಯೂ ಈ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ದಶಮಾನೋತ್ಸವದ ಸುಸಮಯದಲ್ಲಿ ಮೂರು ದಿನಗಳ ಈ ಪಂದ್ಯಾವಳಿಯನ್ನು ಐದು ದಿನಗಳಿಗೆ ವಿಸ್ತರಿಸಿ ದಕ್ಷಿಣ ವಲಯ ಮಟ್ಟದಿಂದ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ರಾಜಾಜಿನಗರದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ (ಶಂಕರಮಠ ಮೈದಾನ) ಡಿಸೆಂಬರ್ ೨೧-೨೫, ೨೦೧೨ರವರೆಗೆ ನಡೆದ ಈ ಪಂದ್ಯಾವಳಿಯಲ್ಲಿ ಆರು ರಾಜ್ಯಗಳ ಪ್ರತಿಷ್ಠಿತ ತಂಡಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕ್ರೀಡಾಭಿಮಾನಿಗಳಿಗೆ ಈ ಪಂದ್ಯಾವಳಿ ರಸದೌತಣವನ್ನು ನೀಡಿತು ಎಂದರೆ ಅತಿಶಯೋಕ್ತಿಯಲ್ಲ. ಈ ಪಂದ್ಯಾವಳಿಯನ್ನು ಆಯೋಜಿಸುವಲ್ಲಿ ಉಪ ಮಹಾಪೌರ ಎಸ್. ಹರೀಶ್‌ರವರ ಕೊಡುಗೆ ಗಮನಾರ್ಹವಾದುದು.

ಸಿಟಿ ರೌಂಡ್

ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಕಾಲದಿಂದ ಕಾಲಕ್ಕೆ ಸಿಟಿರೌಂಡ್ ಹಮ್ಮಿಕೊಳ್ಳುವುದರ ಮೂಲಕ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸುವುದು, ಅವ್ಯವಹಾರಗಳನ್ನು ಬಯಲಿಗೆಳೆದು ಸೂಕ್ತ ಕ್ರಮ ಕೈಗೊಳ್ಳುವುದು, ಆಡಳಿತದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಯತ್ನಿಸುವ ಮೂಲಕ ವಿಶೇಷ ಜನಮೆಚ್ಛುಗೆಗೆ ಪಾತ್ರರಾಗಿದ್ದಾರೆ.
೨೪/೭ ನಿಯಂತ್ರಣ ಕೊಠಡಿ ಬಿಬಿಎಂಪಿಯಲ್ಲಿ ಇದ್ದರೂ ಅದರ ಬಳಕೆ ಅನುಕೂಲಕರವಾಗಿರಲಿಲ್ಲ. ಅದನ್ನು ಸುವ್ಯವಸ್ಥಿತವಾಗಿ ಮಾಡಿ ಅಲ್ಲಿ ಪರಿಣಿತಿ ಹೊಂದಿರುವವರಿಗೆ ಆದ್ಯತೆ ನೀಡಿ ಯಾವುದೇ ಕ್ಷಣಕ್ಕೂ ಕರೆ ಬಂದರೂ ಕೂಡ ದೂರನ್ನು ಸ್ವೀಕರಿಸಿ ಅದಕ್ಕೆ ಸರಿಯಾದ ಪರಿಹಾರ ಒದಗಿಸುವುದಕ್ಕೆ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವoತೆ ಜಾಗೃತಿ ಮಾಡಲಾಗಿದೆ.

ಅನಗತ್ಯ ವೆಚ್ಛಕ್ಕೆ ಕಡಿವಾಣ

ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಾಗಿ ಅಗತ್ಯವಿಲ್ಲದಿದ್ದರೂ ಬಿಬಿಎಂಪಿಯಲ್ಲಿ ಬಹಳ ವರ್ಷಗಳಿಂದ ಇದೊಂದು ದಂಧೆಯಾಗಿ ಪರಿಣಮಿಸಿತ್ತು. ಇದನ್ನು ಪತ್ತೆ ಹಚ್ಚಿ ಪಾಲಿಕೆಗೆ ಎಷ್ಟು ಖಾಸಗಿ ವಾಹನಗಳ ಅವಶ್ಯಕತೆ ಇದೆ ಎಂಬುದನ್ನು ಗಮನಿಸಿ ಅನಗತ್ಯ ವೆಚ್ಛಕ್ಕೆ ಕಡಿವಾಣ ಹಾಕಲಾಗಿದೆ. ಇದರಿಂದ ಪಾಲಿಕೆ ಬೊಕ್ಕಸಕ್ಕೆ ಪ್ರತಿ ತಿಂಗಳು ಆಗುತ್ತಿದ್ಧ ಲಕ್ಷಾಂತರ ರೂಪಾಯಿ ನಷ್ಟವನ್ನು ತಡೆಗಟ್ಟಿದಂತಾಗಿದೆ.
ಪಾಲಿಕೆಯಲ್ಲಿ ಆಯುಕ್ತರ ತಪಾಸಣಾ ಕಾರ್ಯಗಳಿಗಾಗಿ ಖರೀದಿ ಮಾಡಲಾಗಿದ್ದ ವಾಹನಗಳನ್ನು ಮರುಪರಿಶೀಲನೆಗೆ ಒಳಪಡಿಸಿ ಅದರಲ್ಲಿ ನಡೆದಿದೆ ಎನ್ನಲಾಗಿದ್ದ ದೋಷವನ್ನು ಸರಿಪಡಿಸಿ ಆ ಕಂಪನಿಯಿoದ ಪಾಲಿಕೆಗೆ ನಷ್ಟವನ್ನು ಭರಸಿಸಲಾಗಿದೆ. ವಾಹನಗಳನ್ನು ದುರಸ್ತಿ ಮಾಡಿ ಉತ್ತಮ ಉಪಯೋಗಕ್ಕೆ ಬರುವಂತೆ ಸಿದ್ಧತೆ ಮಾಡಲಾಗಿದೆ.

ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ

ನಾಡಿಗೆ ಬೆಳಕು ನೀಡಿದ ಕನ್ನಂಬಾಡಿ ಅಣೆಕಟ್ಟಿನ ಮೂಲಕ ಅನ್ನದಾತರಿಗೆ ನೆರವಾದ, ಮೈಸೂರು ಸಂಸ್ಥಾನದ ದಿವಾನರಾಗಿ ಜನಪರ ಆಡಳಿತಗಾರರೆನಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ನೆನಪನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ರಾಜಾಜಿನಗರದ ಒಂದನೇ ಬ್ಲಾಕ್‌ನಲ್ಲಿ ಸರ್.ಎಂ.ವಿ. ಅವರ ಬೃಹತ್ ಗಾತ್ರದ ಪ್ರತಿಮೆಯೊಂದನ್ನು ಎಂಜಿನಿಯರ್‌ಗಳ ದಿನಾಚರಣೆಯಂದು ಸ್ಥಾಪಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಅವರನ್ನು ಮಾದರಿಯಾಗಿ ಸ್ವೀಕರಿಸುವ ನಿಟ್ಟಿನಲ್ಲಿ ಅವರ ಸಾಧನೆಗಳನ್ನು ಪರಿಚಯಿಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಚಿಣ್ಣರ ಉತ್ಸವ

ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡಿ, ಅವರಲ್ಲಿ ಅಡಗಿರುವ ಬೃಹತ್ ಪ್ರತಿಭೆಗಳನ್ನು ಗುರುತಿಸಲು ಅವಕಾಶ ಮಾಡಿಕೊಡುವ ಸಲುವಾಗಿ ರಾಜಾಜಿನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲಾ ೧ ರಿಂದ ೧೦ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಾರಂಭದಲ್ಲಿ ಆಯಾ ಶಾಲೆಗಳಲ್ಲಿ ಸ್ಪರ್ಧೆ ನಡೆಸಿ ಅದರಲ್ಲಿ ಆಯ್ಕೆಯಾದವರಿಗೆ ಅಂತಿಮ ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾವನ್ನು ನೀಡಲಾಯಿತು. ವಿವಿಧ ಶಾಲೆಗಳ ಸಾವಿರಾರು ಮಕ್ಕಳು ಈ ಉತ್ಸವದಲ್ಲಿ ಪಾಲ್ಗೊಂಡು ಸಂತೋಷಪಟ್ಟರು.

ಫ್ಲೈ ಓವರ್

ಅತ್ಯಂತ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ರಾಜಾಜಿನಗರ ೧ನೇ ಬ್ಲಾಕ್‌ನ ೧೦ನೇ ಮುಖ್ಯರಸ್ತೆ (ವೆಸ್ಟ್ ಆಫ್ ಕಾರ್ಡ್ ರೋಡ್ ರಸ್ತೆ ಸಮೀಪ) ಜಂಕ್ಷನ್‌ನಲ್ಲಿ ಸುಮಾರು ೨೭ ಕೋಟಿ ವೆಚ್ಛದಲ್ಲಿ ಫ್ಲೈ ಓವರ್ ನಿರ್ಮಾಣ ಯೋಜನೆಗೆ ಅನುಮತಿ ದೊರಕಿದ್ದು ಕಾಮಗಾರಿ ಪ್ರಾರಂಭವಾಗಿದೆ. ಈ ಫ್ಲೈ ಓವರ್ ನಿರ್ಮಾಣದಿಂದ ರಾಜಾಜಿನಗರ, ಯಶವಂತಪುರ, ನಂದಿನಿ ಲೇಔಟ್, ಮಹಾಲಕ್ಷಿ ಲೇ ಔಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ದಿನನಿತ್ಯ ಸಂಚರಿಸುವ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

ನೈರ್ಮಲ್ಯೀಕರಣಕ್ಕೊಂದು ಹೊಸ ಆಯಾಮ

ಸ್ವಚ್ಛ ಬೆಂಗಳೂರು ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಾಗಪುರ ವಾರ್ಡ್ನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಅಭಿಯಾನವನ್ನು ನಡೆಸಲಾಗಿದೆ. ಪ್ರತಿ ಮನೆಬಾಗಿಲಿಗೆ ಹೋಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗಿದ್ದು, ಒಣ ಹಾಗೂ ಹಸಿ ತ್ಯಾಜ್ಯವನ್ನು ವಿಂಗಡಿಸಲು ಅನುಕೂಲವಾಗುವಂತೆ ಆಯ್ದ ಅಪಾರ್ಟ್ಮೆಂಟ್‌ಗಳು ಹಾಗೂ ಬ್ಲಾಕ್‌ಗಳಲ್ಲಿ ಎಲ್ಲಾಮನೆಗೆ ಎರಡು ರೀತಿಯ ಕಸದ ಬುಟ್ಟಿಗಳನ್ನು ವಿತರಿಸಲಾಗಿದೆ. ಕಸವನ್ನು ಅವರವರ ಮನೆಬಾಗಿಲಿನಲ್ಲಿ ಇಡಲು ಮನವಿ ಮಾಡಲಾಗಿದ್ದು ಆ ಕಸವನ್ನು ಪ್ರತಿದಿನವೂ ಪೌರ ಕಾರ್ಮಿಕರು ಕಡ್ಡಾಯವಾಗಿ ಒಯ್ಯುವ ವ್ಯವಸ್ಥೆ ಮಾಡಲಾಗಿದೆ.
ಕೇವಲ ಕಚೇರಿಯನ್ನು ಮಾತ್ರವಲ್ಲ ಇಡೀ ನಾಗಪುರ ವಾರ್ಡ್ನ್ನು ಹಸಿರು ಪ್ರದೇಶವನ್ನಾಗಿಸುವ ಪಣ ತೊಟ್ಟು ಹಲವು ವಿನೂತನ ಪ್ರಯೋಗಗಳನ್ನು ಮಾಡಿ ಯಶಸ್ಸು ಪಡೆದಿದ್ದೇವೆ. ಈ ಹಿಂದೆ ಮಳೆ ಬಂದಾಗಲೆಲ್ಲಾ ಚರಂಡಿ ನೀರು ರಸ್ತೆಗೆ ನುಗ್ಗುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಈಗ ಚರಂಡಿಗಳಲ್ಲಿರುವ ಹೂಳನ್ನು ಎತ್ತಿ ಎರಡೂ ಬದಿಗಳನ್ನು ಭದ್ರಗೊಳಿಸಲಾಗಿದೆ. ಚರಂಡಿಗಳನ್ನು ಮುಚ್ಛಲು ಬಳಸಲಾಗುತ್ತಿದ್ದ ಅಲಂಕಾರಿಕ ಹಾಸುಗಲ್ಲುಗಳ ಬದಲಾಗಿ ಗಟ್ಟಿಮುಟ್ಟಾದ ಪಾರಂಪರಿಕ ಕಲ್ಲುಗಳನ್ನು ಬಳಸಲಾಗುತ್ತಿದೆ. ಅಲ್ಲದೆ ಚರಂಡಿಗಳಲ್ಲಿ ಪ್ರತಿ ೧೦ ಮೀಟರ್‌ಗೆ ಒಂದರoತೆ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಳೆ ನೀರು ಪೋಲಾಗುವುದನ್ನು ತಡೆಯಲಾಗಿದೆ.

ವಿಶೇಷವೇನೆಂದರೆ ಈ ಎಲ್ಲಾ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಜ್ಞರು ಹಾಗೂ ಸಾರ್ವಜನಿಕರನ್ನು ಒಳಗೊಂಡ ಒಂದು ಕಾವಲು ಸಮಿತಿಯನ್ನು ರಚಿಸಲಾಗಿದೆ. ವಿಪರೀತ ಮಾಲಿನ್ಯದಿಂದ ಹದಗೆಟ್ಟಿರುವ ಬೆಂಗಳೂರಿನ ಪರಿಸರವನ್ನು ಕಾಪಾಡುವ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ೨೮೦೦ ಸಸಿಗಳನ್ನು ನೆಡಲಾಗಿದೆ. ಈ ಸಸಿಗಳೆಲ್ಲವೂ ನಮ್ಮ ಸಂಪ್ರದಾಯಿಕ ತಳಿಗಳಾದ ಹೊಂಗೆ, ಬೇವು, ಕಾಡು ಬಾದಾಮಿ ಹಾಗೂ ಮಹಾಗನಿ ಸಸಿಗಳಾಗಿವೆ. ಈ ಸಸಿಗಳ ಸುತ್ತಲೂ ರಕ್ಷಣಾ ಕವಚವನ್ನು ಅಳವಡಿಸಲಾಗಿದೆ ಹಾಗೂ ಕಾಲಕಾಲಕ್ಕೆ ಅವುಗಳಿಗೆ ನೀರು, ಗೊಬ್ಬರ ಉಣಿಸಲಾಗುತ್ತಿದೆ. ಇದರ ನಿರ್ವಹಣೆಯ ಜವಾಬ್ದಾರಿಯನ್ನು ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹೊತ್ತಿರುವುದು ಸಂತಸದ ವಿಷಯ. ಇನ್ನು ಕೆಲವೇ ವರ್ಷಗಳಲ್ಲಿ ಈ ಎಲ್ಲಾ ಪ್ರಯತ್ನಗಳ ಫಲವಾಗಿ ನಾಗಪುರ ಸಂಪೂರ್ಣ ಹಸಿರಿನಿಂದ ಕಂಗೊಳಿಸಲಿದೆ.

ವಾಣಿಜ್ಯ ಬಳಕೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಕಾವಲು ಸಮಿತಿಯನ್ನು ರಚಿಸಿ ಅದರ ನೇತೃತ್ವವನ್ನು ನಾನೇ ವಹಿಸಿದ್ದೇನೆ. ಈ ಸಮಿತಿಯು ರಾತ್ರಿ ಹೊತ್ತು ಸಹ ಸಂಚರಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹಿಡಿದು ಎಚ್ಚರಿಕೆ ನೀಡುತ್ತಿದೆ. ಈ ರೀತಿಯಲ್ಲಿ ಸೂಕ್ತ ಹಾಗೂ ವೈಜ್ಞಾನಿಕ ಕಸ ವಿಲೇವಾರಿ ಕ್ರಮಗಳಿಂದಾಗಿ ತ್ಯಾಜ್ಯಮುಕ್ತ ಸ್ವಚ್ಛ ನಾಗಪುರದ ಕನಸನ್ನು ನನಸಾಗಿಸುವಲ್ಲಿ ನಾವು ಯಶಸ್ಸು ಪಡೆದಿದ್ದೇವೆ.
ನಗರಸಭಾ ಸದಸ್ಯರ ವಿಶೇಷ ಅನುದಾನವನ್ನು ಬಳಸಿಕೊಂಡು ವಾರ್ಡ್ನಲ್ಲಿ ಐದು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಶೌಚಾಲಯಗಳ ನಿರ್ವಹಣೆಯನ್ನು ರಾಜಾಜಿನಗರ ಕ್ರೀಡಾ ಹಾಗೂ ಸಾಂಸ್ಕöÈತಿಕ ಸಂಘ ವಹಿಸಿಕೊಂಡಿದೆ.

ನಮ್ಮ ವಾರ್ಡ್ನ ವ್ಯಾಪ್ತಿಯಲ್ಲಿದ್ದ ಬಹುತೇಕ ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದವು. ಇದರಿಂದಾಗಿ ಆರೋಗ್ಯದ ಸಮಸ್ಯೆ ತೀವ್ರವಾಗಿ ತಲೆದೋರಿತ್ತು. ಇದನ್ನು ಅರಿತ ನಾವು ನಗರದಲ್ಲೇ ಮೊದಲ ಬಾರಿಗೆ ಖಾಲಿ ನಿವೇಶನಗಳನ್ನು ಕಳೆ ಹಾಗು ಕಸದಿಂದ ಮುಕ್ತಗೊಳಿಸಿ ನಿವೇಶನದಾರರಿಗೆ ದಂಡ ವಿಧಿಸುವ ವ್ಯವಸ್ಥೆ ಮಾಡಲಾಯಿತು. ಈ ಕ್ರಮವನ್ನು ಶ್ಲಾಘಿಸಿದ ಪೂಜ್ಯ ಮಹಾಪೌರರು ಅದನ್ನು ಇಡೀ ಬೆಂಗಳೂರಿಗೆ ವಿಸ್ತರಿಸುವಂತೆ ಆದೇಶ ನೀಡಿದ್ದಾರೆ. ಬೇರೆ ವಾರ್ಡ್ಗಳಿಗೆ ಹೋಲಿಸಿದರೆ ನಾಗಪುರ ವಾರ್ಡ್ನಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಸಮಸ್ಯೆ ಸಂಪೂರ್ಣವಾಗಿ ಇಲ್ಲವೆಂದೇ ಹೇಳಬಹುದು. ಇದನ್ನು ಆರೋಗ್ಯ ಇಲಾಖೆಯ ಅಂಶಗಳು ದೃಢಪಡಿಸಿವೆ.

ಹಸಿರು ನಾಗಪುರ
ಸುಂದರ ಬೆಂಗಳೂರು

ನಿಮಗೆಲ್ಲಾ ತಿಳಿದಿರುವಂತೆ ಇಡೀ ಬೆಂಗಳೂರಿನಲ್ಲಿ ಅತಿ ಹೆಚ್ಚು ಉದ್ಯಾನವನಗಳನ್ನು ಹೊಂದಿರುವ ಎರಡನೇ ವಾರ್ಡ್ ಎಂಬ ಹೆಗ್ಗಳಿಕೆ ನಮ್ಮ ನಾಗಪುರ ವಾರ್ಡ್ನದು. ಕೇತಮಾರನಹಳ್ಳಿಯ ಉದಯಕುಮಾರ್ ಉದ್ಯಾನವನ ಇದೀಗ ಹೊಸ ರೂಪ ಪಡೆದಿದ್ದು ಹಸಿರಿನಿಂದ ನಳನಳಿಸುತ್ತಿದೆ. ಬತ್ತಿ ಹೋದಂತಿದ್ದ ಕಾರಂಜಿಗಳು ನೀರು ಚಿಮ್ಮಿಸುತ್ತಿವೆ. ವಾಕಿಂಗ್ ಮಾಡುವವರಿಗೆಂದೇ ಇರುವ ಕಾಲುದಾರಿಯನ್ನು ನವೀಕರಿಸಲಾಗಿದೆ. ಬೇಲಿಯನ್ನು ಸಂಪೂರ್ಣವಾಗಿ ದುರಸ್ಥಿಗೊಳಿಸಲಾಗಿದೆ. ಉದಯಕುಮಾರ್ ಹಾಗೂ ಅಕ್ಕಮಹಾದೇವಿ ಉದ್ಯಾನವನದ ಆಡದ ಮೈದಾನದಲ್ಲಿ ಮಕ್ಕಳಿಗೆಂದು ಆಟದ ಸಲಕರಣಗಳನ್ನು ನವೀಕರಿಸಿ ಅಳವಡಿಸಲಾಗಿದೆ. ಉದಯಕುಮಾರ್ ಉದ್ಯಾನವನದಲ್ಲಿ ನಗೆಕೂಟದವರಿಗೆಂದು ಒಂದು ಸುಂದರ ಶೆಲ್ಟರ್ ಅನ್ನು ನಿರ್ಮಿಸಲಾಗಿದೆ.

ಗೆಳೆಯರ ಬಳಗದಲ್ಲಿರುವ ಪಾರ್ಕ್ ತನ್ನ ಹಸಿರು ಸಿರಿಯಿಂದ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಖ್ಯಾತ ಪರಿಸರ ತಜ್ಞ ಅ. ನ. ಯಲ್ಲಪ್ಪರೆಡ್ಡಿಯವರ ದಕ್ಷ ಮಾರ್ಗದರ್ಶನದಲ್ಲಿ ಆಯುರ್ವೇದಿಯ ಗಿಡಗಳನ್ನೊಳಗೊಂಡ ಸುಂದರ ಪಾರ್ಕ್ ನಿರ್ಮಿಸಲಾಗಿದೆ. ಇದರ ಜೊತೆಗೆ ವಿವೇಕಾನಂದ ಪಾರ್ಕ್ನಲ್ಲಿನ ಆಟದ ಮೈದಾನವನ್ನು ನವೀಕರಿಸಲಾಗಿದ್ದು ಪಾಥ್ ವೇ ನಿರ್ಮಿಸಲಾಗಿದೆ. ಪೈಪ್‌ಲೈನ್ ಉದ್ಯಾನವನದಲ್ಲಿ ಬೋವಿಪಾಳ್ಯದ ಮಕ್ಕಳಿಗಾಗಿ ಎರಡು ಆಟದ ಮೈದಾನಗಳನ್ನು ನಿರ್ಮಿಸಿ ಅಲ್ಲಿಯೂ ಸಹ ನವೀನ ರೀತಿಯಲ್ಲಿ ಆಟದ ಸಲಕರಣೆಗಳನ್ನು ಅಳವಡಿಸಲಾಗಿದೆ.

ಹಸಿರು ವಾರ್ಡ್

ನಾಗಪುರ ವಾರ್ಡ್ನ ಎಲ್ಲಾ ಬೀದಿಗಳಲ್ಲೂ ಸೌರಶಕ್ತಿ ಚಾಲಿತ ಬೀದಿದೀಪಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಹಾಗೂ ಸೌರಶಕ್ತಿಯನ್ನು ಮಿತವಾಗಿ ಬಳಸಲು ಅನುಕೂಲವಾಗುವಂತೆ ಎಲ್‌ಇಡಿ ಬಲ್ಬ್ಗಳನ್ನು ಬಳಸಲಾಗಿದೆ. ಈ ಬೀದಿದೀಪಗಳಿಗೆ ಟೈಮರ್ ಅಳವಡಿಸಲಾಗಿದ್ದು ರಾತ್ರಿ ಸಮಯದಲ್ಲಿ ಮಾತ್ರ ಉರಿಯುವ ವ್ಯವಸ್ಥೆ ಮಾಡಲಾಗಿದೆ. ವಾರ್ಡ್ ಕಚೇರಿಗೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದ್ದು ಬೆಂಗಳೂರಿನಲ್ಲೇ ಇದನ್ನು ಅಳವಡಿಸಿಕೊಂಡ ಪ್ರಥಮ ವಾರ್ಡ್ ಕಚೇರಿ ಎನಿಸಿದೆ.

ಜಾಹೀರಾತು ನೀತಿ

ಈ ಹಿಂದೆ ಬೆಂಗಳೂರು ನಗರದಲ್ಲಿ ಎಲ್ಲೆಲ್ಲೂ ಅನಧಿಕೃತ ಜಾಹೀರಾತು ಫಲಕಗಳು ರಾರಾಜಿಸುತ್ತಿದ್ದವು. ಪಾಲಿಕೆಯಿಂದ ಒಂದು ಫಲಕಕ್ಕೆ ಅನುಮತಿ ಪಡೆದು ಹಲವು ಫಲಕಗಳನ್ನು ಅಳವಡಿಸಲಾಗುತ್ತಿತ್ತು. ಇದರಿಂದ ಪಾಲಿಕೆಯ ಸೌಂದರ್ಯಕ್ಕೆ ಹಾಗೂ ಬೊಕ್ಕಸಕ್ಕೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಸ್ವಚ್ಛ ಬೆಂಗಳೂರು – ಸುಂದರ ಬೆಂಗಳೂರು ಎಂಬ ಪರಿಕಲ್ಪನೆಯ ಅಡಿಯಲ್ಲಿ ಹೊಸ ಜಾಹೀರಾತು ನೀತಿಯೊಂದನ್ನು ಜಾರಿಗೆ ತರಲಾಗಿದೆ.

ಈ ಜಾಹೀರಾತು ನೀತಿಯ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿರುವ ಜಾಹೀರಾತು ಫಲಕಗಳಿಗೆ ಟೆಂಡರ್ ಕರೆಯಲಾಗುತ್ತದೆ. ಅಥವಾ ಹರಾಜು ಹಾಕಲಾಗುತ್ತದೆ. ಹಾಗೂ ಖಾಸಗಿ ಸ್ಥಳಗಳ ಜಾಹೀರಾತು ಫಲಕಗಳ ಜಾಹೀರಾತು ಹಕ್ಕುಗಳನ್ನು ಹರಾಜು ಹಾಕಲಾಗುತ್ತದೆ. ಇದರಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚುವುದಲ್ಲದೇ ಪಾಲಿಕೆಯ ಬೊಕ್ಕಸಕ್ಕೆ ೧೫೦ ಕೋಟಿ ರೂ. ಆದಾಯವಾಗಲಿದೆ. ಸುವ್ಯವಸ್ಥೆಯ ರೀತಿಯಲ್ಲಿ ಸಂಚಾರಕ್ಕೆ ಹಾಗೂ ಸೌಂದರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ಜಾಹೀರಾತು ನೀತಿಯನ್ನು ರೂಪಿಸಲಾಗಿದೆ.

೨೪/೭ ಸಹಾಯವಾಣಿ

ನಿಮ್ಮ ಸಮಸ್ಯೆಗೆ ಶೀಘ್ರ ಸ್ಪಂದನೆ ಸೂಕ್ತ ಪರಿಹಾರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅವುಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲೇ ಪ್ರಪ್ರಥಮ ಬಾರಿಗೆ ನಾಗಪುರ ವಾರ್ಡ್ನಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. ೦೮೦ – ೨೩೧೯ ೯೯೯೯ ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ತಮ್ಮ ದೂರನ್ನು ಸಹಾಯವಾಣಿಯಲ್ಲಿ ದಾಖಲಿಸಬಹುದು. ನಂತರ ಹಾಗೂ ಆ ದೂರನ್ನು ಸಂಬoಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಪರಿಹರಿಸಲಾಗುತ್ತಿದೆ. ಹೀಗೆ ಪರಿಹಾರವಾದ ನಂತರವಷ್ಟೇ ದೂರು ಮುಕ್ತಾಯವಾಗುತ್ತದೆ. ಸಮಸ್ಯೆ ಪರಿಹಾರವಾದ ಬಗ್ಗೆ ದೂರುದಾರರಿಗೆ ಕರೆ ಮಾಡಿ ಮಾಹಿತಿಯನ್ನೂ ನೀಡಲಾಗುತ್ತದೆ. ಹೀಗೆ ಜನರ ಅಗತ್ಯಗಳಿಗೆ ಸೂಕ್ತವಾಗಿ ಸ್ಪಂದಿಸುವ ಸಹಾಯವಾಣಿ ವಾರ್ಡ್ನ ಎಲ್ಲರ ಮನಗೆದ್ದಿದೆ ಎಂಬುದು ಸಂತೋಷದ ವಿಷಯ.

ಅಭಿವೃದ್ಧಿ ಕಾಮಕಾರಿಗಳ ಆಗರ
ಹಲವು ಯೋಜನೆಗಳ ಸಾಕಾರ

ವಾರ್ಡ್ನಲ್ಲಿ ಈಗಾಗಲೇ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಮುಗಿಸಲಾಗಿದೆ. ರಾಜಾಜಿನಗರದ ಎಸ್ ಬ್ಲಾಕ್, ಕೆ ಬ್ಲಾಕ್ ಹಾಗೂ ಆರ್ ಬ್ಲಾಕ್‌ಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ. ನೀರು ಸರಬರಾಜಾಗುವ ಪೈಪ್‌ಗಳನ್ನು ಬದಲಿಸಲಾಗಿದ್ದು ಸ್ವಚ್ಛ ನೀರಿನ ಪೂರೈಕೆಗೆ ಒತ್ತು ನೀಡಲಾಗಿದೆ. ಅಲ್ಲದೆ ರಸ್ತೆಗಳ ಡಾಂಬರೀಕರಣ ಮಾಡಲಾಗಿದೆ.

ಅಳವಡಿಕೆಯಿಂದಾಗಿ ಮಿತ ವಿದ್ಯುತ್ ಬಳಸಿ ಪ್ರಖರ ಬೆಳಕು ಪಡೆಯಬಹುದಾಗಿದೆ. “ಎಲ್ ಇ ಡಿ” ದೀಪಗಳನ್ನು ಬಳಕೆ ಮಾಡಲಾಗಿದೆ. ಈ ಬಲ್ಬ್ಗಳ ಅಳವಡಿಕೆಯಿಂದಾಗಿ ಮಿತ ವಿದ್ಯುತ್ ಬಳಸಿ ಪ್ರಖರ ಬೆಳಕು ಪಡೆಯಬಹುದಾಗಿದೆ. ಈ ಬಲ್ಬ್ಗಳು ಸಾಮಾನ್ಯ ಬಲ್ಬ್ಗಳಿಗಿಂತ ಶೇ. ೭೦ರಷ್ಟು ಕಡಿಮೆ ವಿದ್ಯುತ್ ಬಳಸುತ್ತವೆ. ನಮ್ಮ ವಾರ್ಡ್ನಲ್ಲಿ ಈ ಯೋಜನೆಯ ಸಂಪೂರ್ಣ ಅಳವಡಿಕೆಗಾಗಿ ಪಾಲಿಕೆಯ ಬಜೆಟ್‌ನಲ್ಲಿ ೨ ಕೋಟಿ ರೂ. ಮಂಜೂರು ಮಾಡಿಸಿಕೊಳ್ಳಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ನಮ್ಮ ನಾಗಪುರ ವಾರ್ಡ್ ಅನ್ನು ಗುಂಡಿಮುಕ್ತ ವಾರ್ಡ್ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಿಬಿಎಂಪಿ ನಡೆಸಿರುವ ಸಮೀಕ್ಷೆಯಲ್ಲಿ ನಮ್ಮ ವಾರ್ಡ್ ಇಡೀ ಬೆಂಗಳೂರು ನಗರದಲ್ಲೇ ನಾಲ್ಕನೇ ಸ್ಥಾನ ಗಳಿಸಿದೆ. ಇದೆಲ್ಲವನ್ನೂ ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಧಿಸಲಾಗಿದೆ ಎಂಬುದು ಹೆಮ್ಮೆಯ ವಿಷಯ. ಇದೀಗ ನಮ್ಮ ಗುರಿ ನಂ.೧ ಆಗುವತ್ತ.

ರಸ್ತೆ ಬದಿಗೆ ಡೆಬ್ರಿಸ್
ಹಾಕುವವರನ್ನು ಹಿಡಿದವರಿಗೆ ಬಹುಮಾನ ವಿತರಣೆ

ಮೊದಲ ಬಾರಿಗೆ ಪಾಲಿಕೆಯಲ್ಲಿ ಡೆಬ್ರಿಸ್‌ನ್ನು ರಸ್ತೆ ಬದಿಗೆ ಹಾಕುವವರಿಗೆ ದಂಡ ವಸೂಲಿ ಮಾಡಲಾಗಿದ್ದು ನಂತರ ಅದಕ್ಕೆ ಎಂದೇ ಕೆಲವು ಕಾನೂನು ಕ್ರಮಗಳನ್ನು ಜರುಗಿಸಲು ಪಾಲಿಕೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದು ಇದೇ ಮೊದಲ ಬಾರಿ. ಈ ಡೆಬ್ರಿಸ್‌ನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವವರನ್ನು ಹಿಡಿದು ಕೊಟ್ಟಿರುವುದಕ್ಕಾಗಿ ಖ್ಯಾತ ನಟ ಹಾಗೂ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾದ ಜಗ್ಗೇಶ್‌ರವರಿಗೆ ಬಹುಮಾನದ ಚೆಕ್‌ನ್ನು ಸಾರಿಗೆ ಸಚಿವರಾದ ಆರ್ ಅಶೋಕ್ ನೀಡಿದರು.

ರಸ್ತೆ ಬದಿಗೆ ಡೆಬ್ರಿಸ್
ಹಾಕುವವರನ್ನು ಹಿಡಿದವರಿಗೆ ಬಹುಮಾನ ವಿತರಣೆ

ಮೊದಲ ಬಾರಿಗೆ ಪಾಲಿಕೆಯಲ್ಲಿ ಡೆಬ್ರಿಸ್‌ನ್ನು ರಸ್ತೆ ಬದಿಗೆ ಹಾಕುವವರಿಗೆ ದಂಡ ವಸೂಲಿ ಮಾಡಲಾಗಿದ್ದು ನಂತರ ಅದಕ್ಕೆ ಎಂದೇ ಕೆಲವು ಕಾನೂನು ಕ್ರಮಗಳನ್ನು ಜರುಗಿಸಲು ಪಾಲಿಕೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದು ಇದೇ ಮೊದಲ ಬಾರಿ. ಈ ಡೆಬ್ರಿಸ್‌ನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವವರನ್ನು ಹಿಡಿದು ಕೊಟ್ಟಿರುವುದಕ್ಕಾಗಿ ಖ್ಯಾತ ನಟ ಹಾಗೂ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾದ ಜಗ್ಗೇಶ್‌ರವರಿಗೆ ಬಹುಮಾನದ ಚೆಕ್‌ನ್ನು ಸಾರಿಗೆ ಸಚಿವರಾದ ಆರ್ ಅಶೋಕ್ ನೀಡಿದರು.

ಬಡವರಿಗೊಂದು ಆಶಾಕಿರಣ

ನಾಗಪುರ ವಾಡ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ, ಸಾರ್ವಜನಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸಹಾಯಕ್ಕಾಗಿ ಅನೇಕ ರೀತಿಯಲ್ಲಿ ನೆರವು ಒದಗಿಸಲಾಗುತ್ತಿದೆ. ಮೇಯರ್ ನಿಧಿ ಹಾಗೂ ಸ್ಥಳೀಯ ನಗರಸಭಾ ಸದಸ್ಯರ ಆರೋಗ್ಯ ನಿಧಿ ಯೋಜನೆಗಳ ಅಡಿಯಲ್ಲಿ, ಗಂಭೀರ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಡುಬಡವರಿಗೆ ಚಿಕಿತ್ಸೆ ವೆಚ್ಚಕ್ಕಾಗಿ ಸುಮಾರು ೧೨ ಲಕ್ಷ ರೂ. ಮೌಲ್ಯದ ಚೆಕ್‌ಗಳನ್ನು ವಿತರಿಸಲಾಗಿದೆ.

ನಾಗಪುರ ಕೆಂಪೇಗೌಡ ಪ್ರಶಸ್ತಿ
ಸಾಧಕರನ್ನು ಗುರುತಿಸಿ ಸನ್ಮಾನ

ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಅವರ ಸಾಧನೆಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಕೆಂಪೇಗೌಡ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಈಗಾಗಲೇ ಸುಮಾರು ೫೦ ಜನ ಸಾಧಕರಿಗೆ ಸನ್ಮಾನ ಮಾಡಲಾಗಿದೆ. ಇದೇ ರೀತಿಯಲ್ಲಿ ಮುಂದೆಯೂ ಹಲವು ಸಾಧಕರನ್ನು ಜನರಿಗೆ ಪರಿಚಯಿಸುವ ಉದ್ದೇಶ ನಮ್ಮದು.